ಮುಖಪುಟ
ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವು ೨೦೦೭ ರಲ್ಲಿ ಪ್ರಾರಂಭವಾಗಿ ಕರ್ನಾಟಕ ಸರಕಾರದ ಅಧೀನದಲ್ಲಿ ಬರುವ ಎಲ್ಲಾ ಪ್ರತಿಷ್ಠಿತ ಸರಕಾರಿ ಇಂಜಿನಿಯರಿಂಗ್
ಕಾಲೇಜುಗಲ್ಲಿ ಇದು ಒಂದಾಗಿದೆ. ಹ್ಯೆದರಾಬಾದ್ ಕರ್ನಾಟಕ ಪ್ರಾಂತ್ಯದಲ್ಲಿ ದುರ್ಬಲ ವರ್ಗದವರಿಗಾಗಿಯೆ ತುಂಬಾ ಸುಲಭವಾಗಿ ಸ್ಪಂದಿಸುವ ಕ್ಯೆಗುಟುಕುವ
ವಿದ್ಯಾಸಂಸ್ಥೆಯಾಗಿದ್ದು ಹಾಗೂ ಸರಕಾರದಿಂದ ನಡೆಸಲ್ಪಡುವ ಏಕಮಾತ್ರ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವಾಗಿದೆ.
ಮಹಾವಿದ್ಯಾಲಯವು ರಾಯಚೂರು ನಗರದಿಂದ ೧೦ಕೀ.ಮೀ ಅಂತರದಲ್ಲಿರುವ ಯರಮರಸ್ನಲ್ಲಿದ್ದು, ರಸ್ತೆ ಹಾಗು ರೇಲು ಸಂಚಾರದ ಉತ್ತಮ ಸಂಪರ್ಕ ವ್ಯವಸ್ಥೆಯನ್ನು
ಹೊಂದಿದೆ. ಸಂಸ್ಥೆಯು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದೊಂದಿಗೆ ಸಂಲಗ್ನತೆಯನ್ನು ಹೊಂದಿದ್ದು ಬಿ.ಇ ಪದವಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ,
ಗಣಕ ಯಂತ್ರ ವಿಜ್ಞಾನ, ಯಾಂತ್ರಿಕ ಹಾಗು ಕಾಮಗಾರಿ ಇಂಜಿನಿಯರಿಂಗ್ ಹೀಗೆ ನಾಲ್ಕು ವಿಭಾಗಗಳಲ್ಲಿ ಶ್ಯೇಕ್ಷಣಿಕ ಕೊಡುಗೆಯನ್ನು ನೀಡುತ್ತಲಿದೆ.
ವಿದ್ಯಾಸಂಸ್ಥೆಗೆ ಕೆ.ಇ. ಎ ಯವರು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಫಲಾನುಭವಿಗಳಿಗೆ ಮಾತ್ರ ಪ್ರವೇಶ ನೀಡಲಾಗುವುದು. ಸಂಸ್ಥೆಯಲ್ಲಿ ಪ್ರತಿಶತ ೭೦ ರಷ್ಟು
ವಿದ್ಯಾರ್ಥಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗು ಇತರ ಹಿಂದುಳಿದ ಸಮುದಾಯಕ್ಕೆ ಸೇರಿದವರಾಗಿರುತ್ತಾರೆ. ಇವರಲ್ಲಿ ಬಹುಪಾಲು ಗ್ರಾಮೀಣ ಪ್ರದೇಶದ ಬಡತನ
ರೇಖೆಗಿಂತ ಕೆಳಗಿರುವವರೆ ಆಗಿರುತ್ತಾರೆ.
ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯವು ರಾಯಚೂರು ಜಿಲ್ಲೆಯಲ್ಲಿ ಹಾಗೂ ಜಿಲ್ಲೆಯಾದ್ಯಂತ ಇರುವ ವಿದ್ಯಾಸಂಸ್ಥೆಗಳು ಹಾಗು ಸಂಶೋಧನಾ ಕೇಂದ್ರಗಳೊಡನೆ ಉತ್ತಮ ಬಾಂಧವ್ಯ
ಹೊಂದಿದ್ದು ಮತ್ತು ಅವುಗಳೊಡನೆ ಅಂತರ್ಜಾಲ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದೆ. ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ವಿಷಯಗಳಿಗೆ ಸಂಬಂಧ ಪಟ್ಟಂತೆ ಯೋಜನೆ ತಯಾರಿಕೆಯಲ್ಲಿ
ಹಾಗೂ ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ಮತ್ತು ತಾಂತ್ರಿಕ ಸಹಾಯವನ್ನು ನೀಡುವಲ್ಲಿ ತನ್ನ ಸಹಭಾಗಿತ್ವವನ್ನು ಹೊಂದಿದೆ.